75TH INDEPENDENCE DAY
![]()
2021-22ನೇ ಸಾಲಿನಲ್ಲಿ 75 ನೇ ಸ್ವತಂತ್ರ ದಿನಾಚರಣೆಯ ಹಿನ್ನೆಲೆಯಲ್ಲಿ ʼಆಝಾದಿ ಕಾ ಅಮೃತ ಮಹೋತ್ಸವʼವನ್ನು ಯಶಸ್ವಿಯಾಗಿ ಆಚರಿಸಲು ನಮ್ಮ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳು : ಪ್ರಸಕ್ತ ಶೈಕ್ಷಣಿಕ ವರ್ಷವು ಅಕ್ಟೋಬರ್ ತಿಂಗಳಿನಿಂದ ಪ್ರಾರಂಭವಾಗಿದ್ದು ನಮ್ಮ
ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಬೋಧಕರಿಗೆ ದೇಶಭಕ್ತಿಯನ್ನು ಬೆಳೆಸಲು ದಿನನಿತ್ಯ ವಂದನೆಗಳನ್ನು ಮಾಡುವಾಗ ಹಾಗೂ ಹಾಜರಾತಿಯನ್ನು ಹಾಕುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ʼಜೈ ಹಿಂದ್ʼ”ಎಂಬ ಪದ ಬಳಕೆಯನ್ನು ಮಾಡುವಂತೆ ದೇಶಭಕ್ತಿಯ ಜಾಗೃತಿಯನ್ನು ಎಲ್ಲರಲ್ಲಿಯೂ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,ದೇಶಭಕ್ತಿಯು ಕೇವಲ ಒಂದು ದಿನಕ್ಕೆ ಸೀಮಿತವಾಗಿರಿಸದೇ ವರ್ಷದ ಪ್ರತಿ ದಿನವು ಅದನ್ನು ಪಾಲಿಸುವಂತೆ ಅಭಿಯಾನವನ್ನು ಕೈಗೊಂಡಿದ್ದೇವೆ. ಈ ʼಜೈ ಹಿಂದ್ʼ ಪದಬಳಕೆಯು ನಮ್ಮ ಕಾಲೇಜಿಗೆ ಸೀಮಿತವಾಗಿರದೇ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವಂತಹ ಎಲ್ಲ ಕಾಲೇಜುಗಳಲ್ಲಿಯೂ ಪಾಲಿಸಿದರೆ ದೇಶಭಕ್ತಿಯ ಅರಿವನ್ನು ಎಲ್ಲೆಡೆ ಪಸರಿಸಿದಂತಾಗುವುದು ಎಂಬುದೇ ನಮ್ಮ ಆಶಯ.


