SPORTS ACHIEVERS

ಕೆ.ಎಲ್.ಇ ಪದವಿ ಕಾಲೇಜು, ಗೋಕಾಕ್ ನ ವಿದ್ಯಾರ್ಥಿನಿಯರ ಕ್ರೀಡಾ ಸಾಧನೆ

ಗೋಕಾಕ್:‌ ಬೆಳಗಾವಿ ರಾಣಿಚೆನ್ನಮ್ಮಾ ವಿಶ್ವವಿದ್ಯಾಲಯವು 2021 ನೇ ಸಾಲಿನ ಏಕವಲಯ ಹ್ಯಾಂಡ್‌ ಬಾಲ್‌ ಪಂದ್ಯಾವಳಿಯನ್ನು ಜನೇವರಿ 11 ಮತ್ತು 12 ನೇ ದಿನಾಂಕದಂದು ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಆಯೋಜಿಸಿತ್ತು. ಮಹಿಳೆಯರ ವಿಭಾಗದಲ್ಲಿ ಒಟ್ಟು 14 ತಂಡಗಳು ಬಾಗವಹಿಸಿದ್ದು ಈ ಪೈಕಿ ಕೆ.ಎಲ್.ಇ ಪದವಿ ಕಾಲೇಜು, ಗೋಕಾಕ್‌ ನ (ವಾಣಿಜ್ಯ ವಿಭಾಗ) ವಿದ್ಯಾರ್ಥಿನಿಯರು ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ತೋರಿಸಿ ದ್ವಿತೀಯ ಸ್ಥಾನ ಪಡೆದುಕೊಂಡರು.

ವಿದ್ಯಾರ್ಥಿನಿಯಾದ ರುತ್ವಿಕಾ ಕೊಳಗಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ʼಉತ್ತಮ ಆಟಗಾರ್ತಿʼ ಪ್ರಶಸ್ತಿ ಹಾಗೂ ʼಯೂನಿವರ್ಸಿಟಿ ಬ್ಲೂʼ ಆಗಿ ಹೊರಹೊಮ್ಮಿದ್ದಾಳೆ. ಸಾಧನೆ ಗೈದ ವಿದ್ಯಾರ್ಥಿನಿಯರನ್ನು ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಮಾನ್ಯ ಶ್ರೀ ಜಯಾನಂದ ಮುನವಳ್ಳಿಯವರು, ಪ್ರಾಚಾರ್ಯರರಾದ ಶ್ರೀ ಅಮೃತ ಜಕ್ಕಲಿ ,ತರಬೇತಿದಾರರಾದ ಶ್ರೀ ಸುರೇಶ ಚನ್ನಾಳ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದರು.